ನಂಬುಗೆ
- ಅದರ ಮೇಲೆ ನಿಂತಿದೆ ಜಗತ್ತು!
ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ.
ಭಕ್ತನಾಗಬೇಕಾದರೆ ಮೊದಲು ಇರಬೇಕಾದುದೇ ದೇವರ ಮೇಲೆ ನಂಬುಗೆ!
ಭಕ್ತಿಗೂ ನಂಬುಗೆಯೇ ಮೂಲ..
ವೇದಗಳು ಹೇಳುವಂತೆ - ನಂಬುಗೆಯಿದ್ದರೆ ಎಲ್ಲಾ ಅಪೇಕ್ಷೆಗಳನ್ನೂ ಅದು ಪೂರ್ಣ ಮಾಡಬಲ್ಲದು!
ಯಾವುದು ವಿಜ್ಞಾನದಿಂದ ಅಸಾಧ್ಯವೋ, ಅದು ನಂಬುಗೆಯಿಂದ ಸಾಧ್ಯ!
ನಂಬುಗೆಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ!
- ಶ್ರೀಸಂದೇಶ 18-07-2022