ಕರ್ಮದಿಂದ ಅಲ್ಲ;
ವಂಶ ಪರಂಪರೆಯ ಮೂಲಕವೂ ಅಲ್ಲ;
ಹಣದ ಮೂಲಕ ಕೂಡ ಅಲ್ಲ;
"ತ್ಯಾಗ"ದಿಂದ ಕೆಲವರು ಅಮೃತತ್ತ್ವವನ್ನು ಪಡೆದವರು!
ಹಾಗಾಗಿ ಅವರು ವಂದನೆಗೆ ಅರ್ಹರು.
ಎಲ್ಲಿ ತ್ಯಾಗವಿದೆಯೋ ಅಲ್ಲಿಗೆ ವಂದನೆ ಸಲ್ಲುವಂತಹದ್ದು; ಎಲ್ಲಿ ಭೋಗವಿದೆಯೋ, ಅಲ್ಲಿಗಲ್ಲ.
ಹಾಗಾದರೆ, ಮನುಷ್ಯನನ್ನು ಶ್ರೇಷ್ಠನನ್ನಾಗಿಸತಕ್ಕಂತಹಾ "ತ್ಯಾಗ"ವೆಂಬ ಗುಣ, ಏನದು?
- ಶ್ರೀಸಂದೇಶ 17-07-2022