*ನಮ್ಮ ಬದುಕು ಬೊಂಬೆಯಾಟ;
ನಾವೇ ಬೊಂಬೆಗಳು;
ಆಡಿಸುವವನು ಕಾಲ;
ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ!
*ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ;
ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು!
*ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ;
ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ;
ಬಂತು ಫಲ ಅಲ್ಲಿ!
*ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು!
*ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು?
-ಶ್ರೀಸಂದೇಶ 25-07-2024
#ಅನಾವರಣ_ಚಾತುರ್ಮಾಸ್ಯ - ದಿನ 5
#Chaturmasya