1. EachPod

ಆಹಾರ ಮತ್ತು ಆರೋಗ್ಯ:ಒಳ್ಳೆಯ ಆರೋಗ್ಯದ ಗುಟ್ಟೇನು?

Author
Sadhguru Kannada
Published
Mon 15 May 2023
Episode Link
https://omny.fm/shows/sadhguru-kannada/fd72df59-20b1-402b-9e66-b002010acb4a

ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ನೋಡುತ್ತಿರುವಿರಾ? ಆಹಾರ ಮತ್ತು ಪೋಷಣೆಯ ಪ್ರಾಮುಖ್ಯತೆಯ ಕುರಿತು ಸದ್ಗುರುಗಳ ವಿವೇಕದ ಮಾತುಗಳನ್ನು ಕೇಳಿ.

ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾದ ಪಿ ಸಿ ರೆಡ್ಡಿಯವರು ಸದ್ಗುರುಗಳನ್ನು ಒಳ್ಳೆ ಆರೋಗ್ಯದ ಸೂತ್ರವೇನು ಎಂದು ಕೇಳುತ್ತಾರೆ. ಉತ್ತರವಾಗಿ ಸದ್ಗುರು, ರೋಗಗಳನ್ನು ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ ಎಂದು ವಿಂಗಡನೆ ಮಾಡುತ್ತಾರೆ. ಹೊರಗಿನಿಂದ ಬರುವಂತಹ ಸಾಂಕ್ರಾಮಿಕ ರೋಗಗಳನ್ನು ನಿವಾರಿಸಲು ನಾವು ವೈದ್ಯಕೀಯ ವಿಜ್ಞಾನದ ಸಹಾಯವನ್ನು ಪಡೆಯಬೇಕು. ಆದರೆ ದೀರ್ಘಕಾಲಿಕ (ಕ್ರಾನಿಕ್) ಖಾಯಿಲೆಗಳು ಉಂಟಾಗುವುದು ನಮ್ಮೊಳಗಿನಿಂದಲೇ. ಆದ್ದರಿಂದ, ಅವುಗಳನ್ನು ಸರಿಪಡಿಸಲು ನಾವು ಹೋಗಬೇಕಾಗಿರುವುದು ನಮ್ಮ ದೇಹವನ್ನು ನಿರ್ಮಿಸುವ ನಮ್ಮೊಳಗಿನ manufacturer ಹತ್ತಿರ, ಯಾವುದೋ ಲೋಕಲ್ ಮೆಕ್ಯಾನಿಕ್ ಹತ್ತಿರ ಅಲ್ಲ ಎಂದು ಹಾಸ್ಯಪೂರ್ವಕವಾಗಿ ಮನವರಿಕೆ ಮಾಡುತ್ತಾರೆ.

ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices

Share to: